Friday 15 April 2011

ಅಭ್ರದೊಳಗೆ



ಮಣ್ಣಿನ ವಾಸನೆ ಗಗನಚುಂಬಿ  
ಗಗನಕುಸುಮ ದರೆಗಿಳಿದು
ತನ್ನನ್ನು ತಾನೇ ಅರ್ಪಿಸಿಕೊಂಡು
ಕ್ಷೀರ ಸಾಗರದಂತೆ ಉಕ್ಕರಿದು
ಶಿಥಿಲವಾದದಕ್ಕೆ ಜೀವ ತುಂಬಿ
ಎಲ್ಲವನ್ನು ತಂಪಾಗಿಸಿದ ಕ್ಷಣ
ಯಾರಿಗೂ ಕಾಣದೆ ಮರೆಯಾದಳು
ಅಭ್ರದೊಳಗೆ ಆಯಾಗಿ ವಿರಮಿಸಿದಳು .


ತಂಗಾಳಿ ಎಲ್ಲೆಲ್ಲೂ ಹರಡುತ್ತಾ
ಹಕ್ಕಿ-ಪಕ್ಷಿಗಳ ಚಿಲಿಪಿಲಿನಾದದಲಿ
ಮಕ್ಕಳು ಕುಣಿದಾಡುವ ಹೊತ್ತಲ್ಲಿ
ಮನಸ್ಸನ್ನು ಬೆಚ್ಚಗಾಗಿಸಲು 
ಟೀ-ಕಾಫಿ ಅರಸುತ್ತಾ ಬಂದ ತರುಣ
ಗಗನ - ಕುಸುಮಳನ್ನು ನೋಡಿ 
ಯಾರಿಗೂ ತಿಳಿಯದ ಹಾಗೆ ಪ್ರೀತಿಸಿದರು 
ಮಳೆಯ ಮರೆಯಲ್ಲಿ ಟೀ ಸವಿದರು .

ಬೇಗೆಗೆ ಬಾಡಿದ ಬಳ್ಳಿಯು
ಗಗನಕುಸುಮಳ ಚುಂಬನಕ್ಕೆ ಸಂತಸಗೊಂಡು
ಹಸಿರ - ಉಸಿರು ಸುಳಿದಾಡಿ
ಮುತ್ತಂತೆ ಕಂಗೊಳಿಸಿ 
ಎಲ್ಲರನ್ನು ತನ್ನತ್ತ ಆಕರ್ಷಿಸಿಕೊಂಡು 
ತನ್ನನ್ನು ತಾನು ದೃಢಗೊಳಿಸಿಕೊಳ್ಳಲು
ನೆರವಾದ ,ಗಗನಕುಸುಮಕ್ಕೆ
ನುಡಿದ ಧನ್ಯವಾದಗಳು ಯಾರಿಗೂ ಕೇಳಿಸಲಿಲ್ಲ
ಗಾಳಿಯು ಅವಳತ್ತ ಒತ್ಹ್ಯೋಳಲಿಲ್ಲ .

ಗಗನಕುಸುಮವೇ ಹೆಣ್ಣಾಗಿ
ಶಿಥಿಲವಾದ ಮನಸ್ಸಿಗೆ ಜೀವತುಂಬಿ
ಕುಣಿದಾಡುವ ಮಕ್ಕಳ ಎತ್ತಿ
ಅವರ ಪ್ರೀತಿಯನ್ನು ಅರಸುತ್ತಾ ಹೊರೆಟು
ಬದುಕು ಹಸನಾಗುವ ಗಳಿಗೆಯಲಿ
ಯಾರಿಗೂ ಹೇಳದೆ ಮರೆಯಾಗಿ
ಇರುಳ ಆಗಸದಲ್ಲಿ ಚುಕ್ಕಿಯಾಗುವಳು
ಅಭ್ರದ ಮರೆಯಲ್ಲಿ ಮರೆಯಾಗುವಳು .

Tuesday 12 April 2011

ಪ್ರೀತಿ





ನಾನು ಪ್ರೀತಿಯನ್ನು ಕಂಡ ಗಳಿಗೆ ,

ನಿನ್ನ ಹೆಸರ ಜಪಿಸುತಲಿ
ಈ ಹೃದಯ ಜೀವಿಸುತಿದೆ ....
ಮಂಪರು ಕಾಣದ ಮಧ್ಯದಹಾಗೆ  
ನನ್ನನು ಸೇರು ನನ್ನೊಲವೇ ....
ಮೊಜನು ನೀಡುವ ಗುಡುಗುಡಿಯದಹಾಗೆ
ನನ್ನನು ಆವರಿಸು ನನ್ನೊಡತಿ ....
ಪ್ರಶ್ನೆಯೇ ಮೂಡದ ಬದುಕಿನಲ್ಲಿ
ನಿನ್ನ ಪ್ರೇಮ ಉತ್ತರವಾಗಿದೆ ....
ನಿನ್ನ ಕಂಡ ಕಣ್ಣುಗಳು
ರೆಪ್ಪೆಯ ಬಡಿತದಲ್ಲಿ ಕುಣಿಯುತಿದೆ ....
ಚಿಪ್ಪಿನೊಳಗಿನ ಮುತ್ತಿನಂತೆ
ಹೃದಯದಲ್ಲಿ ಪ್ರೀತಿ ಆವರಿಸಿದೆ ....

ಪ್ರೀತಿಯು ನನ್ನನು ತೊರೆದ ಹೊತ್ತು ,

ಬಡಿತವೆ ನಿಂತ ಹೃದಯದಹೊಳಗೆ
ನಿನ್ನದೆ ಹೆಸರ ಜಪಿಸುತಿದೆ ....
ಬರಿದಾದ  ಮಧುಪಾನದ ಶಿಶೆಯೂ
ಮಂಪರನು ನೋಡಿ ನಗುತಲಿದೆ ....
ಗುಡುಗುಡಿಯ ಸುಟ್ಟ ಕೆಂಡವು
ಮೊಜನು ಕಾಣದೆ ಉರಿಯುತಿದೆ ....
ಹೊಸ್ತಿಲಲ್ಲಿ ನಿಂತ ಪ್ರಶ್ನೆಗೆ
ಉತ್ತರವೇ ಕಾಣದ ಬದುಕಾಗಿದೆ ....
ನಿನ್ನನು ಕಾಣದ ಕಣ್ಣುಗಳು
ರೆಪ್ಪೆಯ ಬಡಿತವನ್ನೇ ಮರೆತಿದೆ ....
ಪ್ರೀತಿಗೆ ಸೋತ ಮನಸು
ನನ್ನನು ನೋಡಿ ಅಣಕಿಸಿದೆ ....    

ಮರೆಯಲು ಹೋದಾಗ


ಮುಂಜಾನೆಯ ಇಬ್ಬನಿಯ ಮುತ್ತಂತೆ
ಮುತ್ತಿನಂತ ನೆನಪುಗಳು ಜಾರಿಹೋದವು
ಯಾರಿಗೂ ಹೇಳದೆ ಹಾರಿಹೋದವು .

ಮುತ್ತಂತ ನೆನಪನ್ನು ಪೊಣಿಸಲು
ಜೀವನದ ಎಳೆಗಳನ್ನು ಬಿಡಿಸಲಾಗಲಿಲ್ಲ 
ಕೊನೆಗೂ ಭದ್ರಗೊಳಿಸಲಾಗಲಿಲ್ಲ .

ಅಕ್ಷರದಲ್ಲಿ ಬರೆಯಲು ಪದಗಳಾಗಲಿಲ್ಲ
ಕಾಗದದ ಮೇಲೆ ಮೂಡಲಿಲ್ಲ
ಉದಯದ ಸಾಲಿಗೆ ಅಸ್ತಮವೇ ತಿಳಿಯಲಿಲ್ಲ .

ಕುಂಚದಲ್ಲಿ ಚಿತ್ರಿಸಲು ಬಣ್ಣಕ್ಕೂ-ಸುಣ್ಣಕ್ಕೂ
ಭೇದ- ಭಾವವೇ ಗೋಚರಿಸಲಿಲ್ಲ
ಅಗೋಚರವಾಗಿಯೂ ಮುಕ್ತವಾಗಲಿಲ್ಲ .

ಮಾತುಗಳಲ್ಲಿ ವರ್ಣಿಸಲು
ಮೌನವೇ ಮಾತನ್ನು ತಿರಸ್ಕರಿಸಿ
ಗೇಲಿ ಮಾಡಲು ಮರೆಯಲಿಲ್ಲ .

ಯಾವುದಕ್ಕೂ ನಿಲುಕದ ನೆನಪು  
ಎದೆಯ ಚಿಪ್ಪಲ್ಲಿ ಕುಳಿತು
ಆಯಾಗಿ ವಿರಮಿಸಿ ಮುತ್ತಾಯೀತು 
ಬದುಕಿಗೆ ರುಚಿಸಲಾಗದ ತುತ್ತಾಯೀತು . 

Friday 1 April 2011

ಬದುಕಿನ ದಾರಿ

ಬದುಕಿನಲ್ಲಿ ಕಳೆದುಕೊಂಡದನ್ನು

ಕುರುಡ ಬೆಳಕಿನಲ್ಲಿ ಉಡುಕಹೊರೆಟ ,

ನೆನಪನ್ನು ಮರೆಯಲು ಹೋಗಿ

ಅಗಲಿದ್ದನ್ನು ನೆನದು ದುಃಖಪಟ್ಟ , 

ಸ್ನೇಹಿತರೊಡನೆ ಹೇಳಲಾಗದ್ದನ್ನು

ಪ್ರೇಯಸಿಯೊಡನೆ ಹಂಚಿಕೊಂಡು ಕಳೆದುಕೊಂಡ ,

ಜೀವನದಲ್ಲಿ ಎಲ್ಲವನ್ನು ಸಮರ್ಥಿಸಿಕೊಂಡು  

ಬದುಕಿಗೆ ಅರ್ಪಿಸಿಕೊಂಡು

ತನನ್ನು ತಾನೇ ನಿರ್ಮಿಸಿಕೊಂಡ

ತನನ್ನು  ತಾನೇ ನಿರ್ಮಿಸಿಕೊಂಡ .