ಮೌನಕ್ಕೆ ಸೋತವನು
ನಿನಗಾಗಿ ಬರೆಯಲು ಸಾಲುಗಳಿಲ್ಲ ,
ನಿನ್ನ ಬಗ್ಗೆ ಹೇಳಲು ಮಾತುಗಳು ಇಲ್ಲ ,
ಕೆಲವೊಮ್ಮೆ ಮಾತುಗಳು ಸಾಲು-ಸಾಲಾಗಿ ಬಂದಾಗ
ಅದನ್ನು ಕೇಳುವ ತಾಳ್ಮೆ ನಿನಗಿಲ್ಲ .
ನಿನಗಾಗಿ ಚಿಂತಿಸಲು ಸಮಯವಿಲ್ಲ ,
ನಿನ್ನ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ ,
ಕೆಲವೊಮ್ಮೆ ಸಿಕ್ಕ ಸಮಯದಲ್ಲಿ ಆಲೋಚಿಸಿದಾಗ
ನನ್ನನೊರೆತು ನಿನ್ನ ಅರ್ಥಮಾಡಿಕೊಂಡವರು
ಬೇರೆ ಯಾರೂ ಇಲ್ಲ .
ನಿನ್ನೊಡನೆ ಮನಬಿಚ್ಚಿ ಮಾತನಾಡಲು ಆಗಲಿಲ್ಲ ,
ನಿನ್ನ ವರ್ತನೆಗಳು ನನಗೆ ತಿಳಿಯಲಿಲ್ಲ ,
ಒಂದು ಕ್ಷಣ ನಿನ್ನ ವರ್ತನೆಗಳನ್ನು ಅರ್ಥಮಾಡಿಕೊಂಡು
ಮೂರು ಮಾತುಗಳಾಡಿದರೆ ನಿನ್ನಿಂದ ದೂರವಾಗುತಿರಲಿಲ್ಲ .
0 Comments:
Post a Comment
Subscribe to Post Comments [Atom]
<< Home