Friday 15 April 2011

ಅಭ್ರದೊಳಗೆ



ಮಣ್ಣಿನ ವಾಸನೆ ಗಗನಚುಂಬಿ  
ಗಗನಕುಸುಮ ದರೆಗಿಳಿದು
ತನ್ನನ್ನು ತಾನೇ ಅರ್ಪಿಸಿಕೊಂಡು
ಕ್ಷೀರ ಸಾಗರದಂತೆ ಉಕ್ಕರಿದು
ಶಿಥಿಲವಾದದಕ್ಕೆ ಜೀವ ತುಂಬಿ
ಎಲ್ಲವನ್ನು ತಂಪಾಗಿಸಿದ ಕ್ಷಣ
ಯಾರಿಗೂ ಕಾಣದೆ ಮರೆಯಾದಳು
ಅಭ್ರದೊಳಗೆ ಆಯಾಗಿ ವಿರಮಿಸಿದಳು .


ತಂಗಾಳಿ ಎಲ್ಲೆಲ್ಲೂ ಹರಡುತ್ತಾ
ಹಕ್ಕಿ-ಪಕ್ಷಿಗಳ ಚಿಲಿಪಿಲಿನಾದದಲಿ
ಮಕ್ಕಳು ಕುಣಿದಾಡುವ ಹೊತ್ತಲ್ಲಿ
ಮನಸ್ಸನ್ನು ಬೆಚ್ಚಗಾಗಿಸಲು 
ಟೀ-ಕಾಫಿ ಅರಸುತ್ತಾ ಬಂದ ತರುಣ
ಗಗನ - ಕುಸುಮಳನ್ನು ನೋಡಿ 
ಯಾರಿಗೂ ತಿಳಿಯದ ಹಾಗೆ ಪ್ರೀತಿಸಿದರು 
ಮಳೆಯ ಮರೆಯಲ್ಲಿ ಟೀ ಸವಿದರು .

ಬೇಗೆಗೆ ಬಾಡಿದ ಬಳ್ಳಿಯು
ಗಗನಕುಸುಮಳ ಚುಂಬನಕ್ಕೆ ಸಂತಸಗೊಂಡು
ಹಸಿರ - ಉಸಿರು ಸುಳಿದಾಡಿ
ಮುತ್ತಂತೆ ಕಂಗೊಳಿಸಿ 
ಎಲ್ಲರನ್ನು ತನ್ನತ್ತ ಆಕರ್ಷಿಸಿಕೊಂಡು 
ತನ್ನನ್ನು ತಾನು ದೃಢಗೊಳಿಸಿಕೊಳ್ಳಲು
ನೆರವಾದ ,ಗಗನಕುಸುಮಕ್ಕೆ
ನುಡಿದ ಧನ್ಯವಾದಗಳು ಯಾರಿಗೂ ಕೇಳಿಸಲಿಲ್ಲ
ಗಾಳಿಯು ಅವಳತ್ತ ಒತ್ಹ್ಯೋಳಲಿಲ್ಲ .

ಗಗನಕುಸುಮವೇ ಹೆಣ್ಣಾಗಿ
ಶಿಥಿಲವಾದ ಮನಸ್ಸಿಗೆ ಜೀವತುಂಬಿ
ಕುಣಿದಾಡುವ ಮಕ್ಕಳ ಎತ್ತಿ
ಅವರ ಪ್ರೀತಿಯನ್ನು ಅರಸುತ್ತಾ ಹೊರೆಟು
ಬದುಕು ಹಸನಾಗುವ ಗಳಿಗೆಯಲಿ
ಯಾರಿಗೂ ಹೇಳದೆ ಮರೆಯಾಗಿ
ಇರುಳ ಆಗಸದಲ್ಲಿ ಚುಕ್ಕಿಯಾಗುವಳು
ಅಭ್ರದ ಮರೆಯಲ್ಲಿ ಮರೆಯಾಗುವಳು .

1 Comments:

At 1 May 2011 at 02:29 , Blogger Gubbachchi Sathish said...

tumba meaningful agide.
thanks for visiting my blog.
keep writing and keep in touch.

Gubbachchi.

 

Post a Comment

Subscribe to Post Comments [Atom]

<< Home