Sunday 8 May 2011

ನನ್ನ ಇಂಜಿನಿಯರಿಂಗ್ ಕಾಲೇಜು



ನನ್ನ ಕಾಲೇಜು ಇದು ನನ್ನ ಕಾಲೇಜು   
ನನ್ನ ಮಂದಿ ಇವರು ನನ್ನ ಕಾಲೇಜು ಮಂದಿ

ಒಳಹೊಕ್ಕಿದಲಿ ಕೇಂದ್ರಬಿಂದುವಾದ ಮೆಕ್ಯಾನಿಕಲ್ ಮಂದಿ    
ಅನುದಿನ ಕಾಲೇಜ್ ಬೆಡಗಿಯರ ಹಿಂದೀ    

ಇದ್ದೊರ್ ಮಾತ್ರ ಮೂರೇ ಮಂದಿ  .

ರವಾನೆಯಾದಲ್ಲಿ ಮಾಹಿತಿ ತಂತ್ರಜ್ಞಾನದ ಮಂದಿ
ನಿತ್ಯವೂ ಅಯ್ಯಪ್ಪಸ್ವಾಮಿ ಮೆಟ್ಟಿಲ ಮುಂದಿ
ಅನ್ವೇಷಣೆಯಲ್ಲಿ ,ಮೋಜು-ಮಸ್ತಿಗಾಗಿ ಸಂದಿ-ಗೊಂದಿ .

ಎದುರಲ್ಲಿ ಬೆನ್ನನೆಳುಬಾದ ಸಿವಿಲ್ ಮಂದಿ     
ಧರಿಸುತಿದ್ದರು ಸದಾ ಕಾಕಿ ಅಂಗಿ   
ಕೇಳಿದಲ್ಲಿ ಉತ್ತರಿಸುತ್ತಿದ್ದರು  ನಾವೀಗ ಸರ್ವೆ ಹಿಂದೀ .

ಪ್ರತ್ಯೇಕವಾದ ಕಟ್ಟಡವಿಲ್ಲದ ಗಣಕ ತಂತ್ರಜ್ಞಾನದ ಮಂದಿ      
ಬಲು ಐನಾತಿ ಮಂದಿ        
ಹುಡುಗಿಯರ ಕಣಜವೇ ಹೊಂದಿದ್ದ ಏಕೈಕ ಮಂದಿ      
ಹಿಂಡು-ಹಿಂಡು ಹುಡುಗ್ರು ಇವ್ರ್ ಹಿಂದೀ .

ಸದ್ದಿಲ್ಲದ ಎಲೆಕ್ಟ್ರಿಕಲ್ ಮಂದಿ            
ಪ್ರತ್ಯಕ್ಷವಾಗುತ್ತಿದ್ದರು ಪಾರ್ಕ್-ಬೇಕರಿ ಮುಂದಿ   
ಸುತ್ತುತ್ತಿದ್ದರು ಅನ್ಯರ ಹಿಂದೀ .

ಓದಿಗೆ ಹೆಸರಾದ ಎಲೆಕ್ಟ್ರಾನಿಕ್ಸ್ ಮಂದಿ      
ಎಂದೆಂದಿಗೂ ಮೇಸ್ಟ್ರು ಮೇಡಂಗಳ ಹಿಂದೀ     
ಕಡೆಗೆ ಕಂಪನಿಗಳಿಗೆ ಪ್ಲೇಸ್ ಆದದ್ದು ಹತ್ತೇ ಮಂದಿ  .

ನಮ್ಮ ಆಟೋಮೊಬೈಲ್ ಮಂದಿ     
ಏನ್ನನಾದರು ಹೊಸದನ್ನು ತಡಕುವ ಮಂದಿ
ಎನ್ವಿರಾನ್ಮೆಂಟಲ್ ಮಂದಿ     
ಹಸಿರ ಉಳಿಸಲು ತುಡಿಯುವ ಮಂದಿ
ಕಡೆಯದಾಗಿ industrial production ಮಂದಿ    
ಆಟಕ್ಕೂ ಬಾರದ ಲೆಕ್ಕಕ್ಕೂ ಸಿಗದ ಅಪರೂಪದ ಮಂದಿ .

ನನ್ನ ಮಂದಿ ಇವರು ನನ್ನ ಕಾಲೇಜು ಮಂದಿ     
ನನ್ನ ಕಾಲೇಜು ಇದು ನನ್ನ ಕಾಲೇಜು      
ಯಾರಿಗೂ ಭೇದ ಭಾವ ಮಾಡದ ಕಾಲೇಜು     
ಎಲ್ಲರಿಗೂ ಡಿಗ್ರಿ ನೀಡಿದ ಕಾಲೇಜು    
ಪುಸ್ತಕವಿಲ್ಲದ ಬದುಕಿಗೂ ಪಾಠ ಹೇಳಿದ ಕಾಲೇಜು   
ನನ್ನ ಕಾಲೇಜು ಇದು ನನ್ನ ಇಂಜಿನಿಯರಿಂಗ್ ಕಾಲೇಜು .

5 Comments:

At 10 May 2011 at 11:38 , Blogger Look 'n' Pick said...

Kanda.... mastho... really nice dear...:)

 
At 11 May 2011 at 02:22 , Blogger sathish H.P said...

hello,,
are u mech branch,,
lol,,
nice macha,,

 
At 11 May 2011 at 07:22 , Blogger ರಾಜೇಶ್ ನಾಗತಿಹಳ್ಳಿ said...

@shylu : thanku ..... :)
@satish : i m frm IS ..... thanks ..... :)

 
At 11 May 2011 at 21:41 , Blogger Hemantha kumara M S said...

Super kano...

 
At 8 June 2011 at 04:05 , Blogger ಗಿರೀಶ್.ಎಸ್ said...

namma collegannu nenapisi bidtu ninna padagalu....

 

Post a Comment

Subscribe to Post Comments [Atom]

<< Home