Tuesday 12 April 2011

ಮರೆಯಲು ಹೋದಾಗ


ಮುಂಜಾನೆಯ ಇಬ್ಬನಿಯ ಮುತ್ತಂತೆ
ಮುತ್ತಿನಂತ ನೆನಪುಗಳು ಜಾರಿಹೋದವು
ಯಾರಿಗೂ ಹೇಳದೆ ಹಾರಿಹೋದವು .

ಮುತ್ತಂತ ನೆನಪನ್ನು ಪೊಣಿಸಲು
ಜೀವನದ ಎಳೆಗಳನ್ನು ಬಿಡಿಸಲಾಗಲಿಲ್ಲ 
ಕೊನೆಗೂ ಭದ್ರಗೊಳಿಸಲಾಗಲಿಲ್ಲ .

ಅಕ್ಷರದಲ್ಲಿ ಬರೆಯಲು ಪದಗಳಾಗಲಿಲ್ಲ
ಕಾಗದದ ಮೇಲೆ ಮೂಡಲಿಲ್ಲ
ಉದಯದ ಸಾಲಿಗೆ ಅಸ್ತಮವೇ ತಿಳಿಯಲಿಲ್ಲ .

ಕುಂಚದಲ್ಲಿ ಚಿತ್ರಿಸಲು ಬಣ್ಣಕ್ಕೂ-ಸುಣ್ಣಕ್ಕೂ
ಭೇದ- ಭಾವವೇ ಗೋಚರಿಸಲಿಲ್ಲ
ಅಗೋಚರವಾಗಿಯೂ ಮುಕ್ತವಾಗಲಿಲ್ಲ .

ಮಾತುಗಳಲ್ಲಿ ವರ್ಣಿಸಲು
ಮೌನವೇ ಮಾತನ್ನು ತಿರಸ್ಕರಿಸಿ
ಗೇಲಿ ಮಾಡಲು ಮರೆಯಲಿಲ್ಲ .

ಯಾವುದಕ್ಕೂ ನಿಲುಕದ ನೆನಪು  
ಎದೆಯ ಚಿಪ್ಪಲ್ಲಿ ಕುಳಿತು
ಆಯಾಗಿ ವಿರಮಿಸಿ ಮುತ್ತಾಯೀತು 
ಬದುಕಿಗೆ ರುಚಿಸಲಾಗದ ತುತ್ತಾಯೀತು . 

2 Comments:

At 3 May 2011 at 08:09 , Blogger Indushree Gurukar said...

ತುಂಬಾ ಚೆಂದದ ರೂಪಕಗಳನ್ನು ಕಟ್ಟಿಕೊಟ್ಟಿರುವ ಸಾಲುಗಳು
ಹೀಗೆ ಬರೆಯುತ್ತಿರಿ :)

 
At 3 May 2011 at 20:29 , Blogger ರಾಜೇಶ್ ನಾಗತಿಹಳ್ಳಿ said...

ಧನ್ಯವಾದಗಳು ಗೆಳತಿ....

 

Post a Comment

Subscribe to Post Comments [Atom]

<< Home