Saturday 26 March 2011

ಮೌನಕ್ಕೆ ಸೋತವನು






ನಿನಗಾಗಿ ಬರೆಯಲು ಸಾಲುಗಳಿಲ್ಲ ,

ನಿನ್ನ ಬಗ್ಗೆ ಹೇಳಲು ಮಾತುಗಳು ಇಲ್ಲ ,

ಕೆಲವೊಮ್ಮೆ ಮಾತುಗಳು ಸಾಲು-ಸಾಲಾಗಿ ಬಂದಾಗ

ಅದನ್ನು ಕೇಳುವ ತಾಳ್ಮೆ ನಿನಗಿಲ್ಲ .


ನಿನಗಾಗಿ ಚಿಂತಿಸಲು ಸಮಯವಿಲ್ಲ ,

ನಿನ್ನ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ ,

ಕೆಲವೊಮ್ಮೆ ಸಿಕ್ಕ ಸಮಯದಲ್ಲಿ ಆಲೋಚಿಸಿದಾಗ 

ನನ್ನನೊರೆತು ನಿನ್ನ ಅರ್ಥಮಾಡಿಕೊಂಡವರು

ಬೇರೆ ಯಾರೂ ಇಲ್ಲ .


ನಿನ್ನೊಡನೆ ಮನಬಿಚ್ಚಿ ಮಾತನಾಡಲು ಆಗಲಿಲ್ಲ ,

ನಿನ್ನ ವರ್ತನೆಗಳು ನನಗೆ ತಿಳಿಯಲಿಲ್ಲ ,

ಒಂದು ಕ್ಷಣ ನಿನ್ನ ವರ್ತನೆಗಳನ್ನು ಅರ್ಥಮಾಡಿಕೊಂಡು

ಮೂರು ಮಾತುಗಳಾಡಿದರೆ ನಿನ್ನಿಂದ ದೂರವಾಗುತಿರಲಿಲ್ಲ .

Friday 25 March 2011

ದ್ವಂದ್ವ



ಹುಟ್ಟಿನ ಮೂಲವೇನು?
ಸಾವಿನ ರಹಸ್ಯವೇನು?
ರಹಸ್ಯದ ಮೂಲವೇ ಹುಟ್ಟು ಸಾವ?

ಎಲ್ಲರೂ ಹುಟ್ಟು ಸಾವನ್ನು ಕಂಡವರೇ
ಆದರೆ ಅದರ ರಹಸ್ಯವನ್ನು ಭೇದಿಸಿದವರು ಯಾರು?
ಭೀಷ್ಮನೆ, ಇಲ್ಲವೇ ಪರುಶುರಾಮನೆ?
ಪರುಶುರಾಮನು ಹುಟ್ಟಿಗೆ ಸೋತವನು,
ಭೀಷ್ಮನೂ ಸಾವಿಗೆ ಶರಣಾದವನು.

ಹುಟ್ಟು ಶಾಪವೇ?
ಸಾವು ಶಾಪವಾಗಿರುವ ವರವೇ?
ನಿನ್ನೆ ಎಂಬುದು ಹುಟ್ಟೇ? ಅಂದಕಾರ ಎಂಬುದು ಸಾವ?
ನಾಳೆ ಎಂಬುದು ಸಾವ? ಬೆಳಕು ಎಂಬುದು ಹುಟ್ಟೇ?
ನಿನ್ನೆ - ನಾಳೆ ನಡುವೆ ಇರುವ ಮನುಜನ ದ್ವಂದ್ವವೇನು?

ಹುಟ್ಟು ಆಸೆಯಲ್ಲಿ ಅಡಗಿದೆಯೇ?
ಇಲ್ಲವೇ ನಿಸರ್ಗದಲ್ಲಿದೆಯೇ?
ಇಲ್ಲ ಸಾವಿನ ಮೂಲವೇ ಹುಟ್ಟಾ?
ಕನಸು ಹುಟ್ಟಿಗೆ ಕಾರಣವಾದರೆ,
ನನಸು ಸಾವಿಗೆ ಮೂಲವಲ್ಲವೇ?
ಹಾಗಾದರೆ ನನಸಾಗದ ಕನಸುಗಳು,
ಮಾನವನ ಬದುಕೇ?
ಬದುಕು ಎಂದರೇನು???? 

Saturday 19 March 2011

VIRTUAL ಯುಗ



ಬಸ್ Stand ನಲ್ಲಿ Software ಹುಡುಗಿ
ನೋಡಲು ತುಂಬಾ Soft;
ಅವಳನು ಕಂಡ Hardware ಹುಡುಗ
ಅಲ್ಲೇ Alt;
ಅವಳು ಬಸ್ ಗೆ Shift;
ಇವನು ಅಲ್ಲಿಂದ Esc;


Tab;


ಅವನ ಕ೦ಗಳು ದಾರಿಯಲ್ಲಿ ಹೋಗುವ
ಬಾಲೆಯರ ಮೇಲೆ Shift ;
Soft ಹುಡುಗಿಗೆ ಮನಸೋತ ಅವನು
ಎಲ್ಲರಿಗೂ  Shift+Del ;


ಅವಳಿಗಾಗಿ Daily Stand ನಲ್ಲಿ Alt+F5;
ಆದರೆ ಅವಳು ಯಾವಾಗಲು Alt +F4;
ಕಥೆಗೆ ಹೊಸ ಹುಡುಗ Enter;
Hardware ಹುಡುಗ ಅವಳಿಗೆ Alt+f4+U;


Hardware ಹುಡುಗನ ಹುಡುಗಿಯ ಹುಡುಕಾಟಾ
ಮುಂದುವರಿಯಿತು www .ಮುಖಪುಸ್ತಕ.com ನಲ್ಲಿ.
Email : hardwarehuduga@gmail.com
Password : ***********
Status " C:\> search softwaregirl.exe"
Signout .

'ತಿಂ (ದ) ಗಳು' ಗಳು



ಅದು ಪಾಲ್ಗುಣ ತಿಂಗಳು
ನಿದ್ದ್ರೆ ಬಾರದ ಕಣ್ಣುಗಳು
ಓದುತಿದ್ದವು ಮಾಸಿಕ ಪತ್ರಿಕೆ - ತಿಂಗಳು.

ಮುಚ್ಚಿದ್ದ ಕೊಠಡಿಯ ಬಾಗಿಲು ತೆರೆದಾಗ
ಆಗಸದಲ್ಲಿ ನನಗೆ ಕಂಡಿದ್ದು ತಿಂಗಳು,
ನಸುಕಿನ ಬೆಳಗಿನಲ್ಲಿ
ಎಲ್ಲೆಲ್ಲೂ ಹರಡಿತ್ತು ಬೆಳದಿಂಗಳು.
ಇದೇ ಪ್ರೇರಣೆಯಲ್ಲಿ ಬರೆಯಲು
ಕುಳಿತೆ 'ಈ ತಿಂಗಳು',
ನಂತರದ ಸಮಯದಲ್ಲಿ ನನಗರಿವಾದ್ದದು
ಇದಾಗುವುದು 'ಹಲಸಿದ ತoಗಳು '.

ಏಕೆಂದರೆ ಅಕ್ಷರದ ಕಡೆಯಲ್ಲಿ
ಮೂಡಿದವು 'ಗಳು' ಗಳು,
ಭಟ್ಟರ ಪಂಚರಂಗಿಯಲ್ಲಿ
ಎಲ್ಲರನ್ನು ಆವರಿಸಿದ್ದು ಇದೇ 'ಗಳು' ಗಳು.

ಇದನ್ನು ಅರಿತ ನನ್ನ ಕoಗಳು
ಹುಡುಕಾಡಿದವು ಹಾಸಿಗೆ-ದಿಂಬು-ಕoಬಳೀಗಳು
ಕೊನೆಗೂ ನನ್ನ ತಲೆ 'ತಿಂ (ದ) ಗಳು' ಗಳು.