Sunday 8 May 2011

ನನ್ನ ಇಂಜಿನಿಯರಿಂಗ್ ಕಾಲೇಜು



ನನ್ನ ಕಾಲೇಜು ಇದು ನನ್ನ ಕಾಲೇಜು   
ನನ್ನ ಮಂದಿ ಇವರು ನನ್ನ ಕಾಲೇಜು ಮಂದಿ

ಒಳಹೊಕ್ಕಿದಲಿ ಕೇಂದ್ರಬಿಂದುವಾದ ಮೆಕ್ಯಾನಿಕಲ್ ಮಂದಿ    
ಅನುದಿನ ಕಾಲೇಜ್ ಬೆಡಗಿಯರ ಹಿಂದೀ    

ಇದ್ದೊರ್ ಮಾತ್ರ ಮೂರೇ ಮಂದಿ  .

ರವಾನೆಯಾದಲ್ಲಿ ಮಾಹಿತಿ ತಂತ್ರಜ್ಞಾನದ ಮಂದಿ
ನಿತ್ಯವೂ ಅಯ್ಯಪ್ಪಸ್ವಾಮಿ ಮೆಟ್ಟಿಲ ಮುಂದಿ
ಅನ್ವೇಷಣೆಯಲ್ಲಿ ,ಮೋಜು-ಮಸ್ತಿಗಾಗಿ ಸಂದಿ-ಗೊಂದಿ .

ಎದುರಲ್ಲಿ ಬೆನ್ನನೆಳುಬಾದ ಸಿವಿಲ್ ಮಂದಿ     
ಧರಿಸುತಿದ್ದರು ಸದಾ ಕಾಕಿ ಅಂಗಿ   
ಕೇಳಿದಲ್ಲಿ ಉತ್ತರಿಸುತ್ತಿದ್ದರು  ನಾವೀಗ ಸರ್ವೆ ಹಿಂದೀ .

ಪ್ರತ್ಯೇಕವಾದ ಕಟ್ಟಡವಿಲ್ಲದ ಗಣಕ ತಂತ್ರಜ್ಞಾನದ ಮಂದಿ      
ಬಲು ಐನಾತಿ ಮಂದಿ        
ಹುಡುಗಿಯರ ಕಣಜವೇ ಹೊಂದಿದ್ದ ಏಕೈಕ ಮಂದಿ      
ಹಿಂಡು-ಹಿಂಡು ಹುಡುಗ್ರು ಇವ್ರ್ ಹಿಂದೀ .

ಸದ್ದಿಲ್ಲದ ಎಲೆಕ್ಟ್ರಿಕಲ್ ಮಂದಿ            
ಪ್ರತ್ಯಕ್ಷವಾಗುತ್ತಿದ್ದರು ಪಾರ್ಕ್-ಬೇಕರಿ ಮುಂದಿ   
ಸುತ್ತುತ್ತಿದ್ದರು ಅನ್ಯರ ಹಿಂದೀ .

ಓದಿಗೆ ಹೆಸರಾದ ಎಲೆಕ್ಟ್ರಾನಿಕ್ಸ್ ಮಂದಿ      
ಎಂದೆಂದಿಗೂ ಮೇಸ್ಟ್ರು ಮೇಡಂಗಳ ಹಿಂದೀ     
ಕಡೆಗೆ ಕಂಪನಿಗಳಿಗೆ ಪ್ಲೇಸ್ ಆದದ್ದು ಹತ್ತೇ ಮಂದಿ  .

ನಮ್ಮ ಆಟೋಮೊಬೈಲ್ ಮಂದಿ     
ಏನ್ನನಾದರು ಹೊಸದನ್ನು ತಡಕುವ ಮಂದಿ
ಎನ್ವಿರಾನ್ಮೆಂಟಲ್ ಮಂದಿ     
ಹಸಿರ ಉಳಿಸಲು ತುಡಿಯುವ ಮಂದಿ
ಕಡೆಯದಾಗಿ industrial production ಮಂದಿ    
ಆಟಕ್ಕೂ ಬಾರದ ಲೆಕ್ಕಕ್ಕೂ ಸಿಗದ ಅಪರೂಪದ ಮಂದಿ .

ನನ್ನ ಮಂದಿ ಇವರು ನನ್ನ ಕಾಲೇಜು ಮಂದಿ     
ನನ್ನ ಕಾಲೇಜು ಇದು ನನ್ನ ಕಾಲೇಜು      
ಯಾರಿಗೂ ಭೇದ ಭಾವ ಮಾಡದ ಕಾಲೇಜು     
ಎಲ್ಲರಿಗೂ ಡಿಗ್ರಿ ನೀಡಿದ ಕಾಲೇಜು    
ಪುಸ್ತಕವಿಲ್ಲದ ಬದುಕಿಗೂ ಪಾಠ ಹೇಳಿದ ಕಾಲೇಜು   
ನನ್ನ ಕಾಲೇಜು ಇದು ನನ್ನ ಇಂಜಿನಿಯರಿಂಗ್ ಕಾಲೇಜು .

Friday 6 May 2011

ನನ್ನವಳು ಅವಳು ನನ್ನವಳು



ಸಿಂಧೂರ ಮೂಗುತಿ ಬೆಂಡೋಲೆ ಕಾಣದವಳು
ಶರ್ಟ್ ಪ್ಯಾಂಟ್ ದರಿಸಿದವಳು
ಗಾಳಿಗೆ ರೇಶಿಮೆ ಕೂದಲ ಬಿಟ್ಟಿರುವವಳು
ಗೋರಂಟಿಯ  ಲೇಪಿಸಿದ ಕೈಗಲ್ಲಿ   
ಒಂದಕ್ಕೆ ರಿಬ್ಬೊನ್ ಮತ್ತೊಂದಕ್ಕೆ ಗಡಿಯಾರ ಧರಿಸಿ   
ಕಣ್ಣಿಗೆ ಕಾಡಿಗೆ ತುಟಿಗೆ ಲಿಪಸ್ಸ್ತಿಕ್ಕ್
ಕೆಂಪಾದ ಮುದ್ದು ಮುಖದವಳು
ಅಂಕು ಡೊಂಕಾದ ಉಬ್ಬಿನವಳು
ನನ್ನ ಬಳಿ ಸುಳಿದಳವಳು  ಬಸ್ಸಿನಲ್ಲಿ
ನನ್ನವಳು ಅವಳು ನನ್ನವಳು .

ಮಲೆನಾಡ ಹೆಣ್ಣವಳು
ಮೊಬೈಲಿನಲ್ಲಿ ಪಿಸುಗುಡುತಿರುವಳು
ಆಂಗ್ಲ ಭಾಷೆಯಲ್ಲಿ
ಎಲ್ಲರು ಅವಳತ್ತ ನೋಡುತಿರಲು
ಅವಳು ನನ್ನತ್ತ ಸನ್ನೆಮಾಡುತಿರಲು
ನಿಮ್ಮ ಮೊಬೈಲ್ ಕೆಳಗೆ ಬಿದ್ದಿರುವುದು ಎಂದು ,
ಅರಿವೇ ಇಲ್ಲದೆ ಕೂತಿರಲು ನಾನು  
ಅವಳ ತಿವಿತಕ್ಕೆ ಬೆಚ್ಚಿದೆ ನಾನು
ನನ್ನವಳು ಅವಳು ನನ್ನವಳು .

ನೋಡುತಲಿ ಸುಳಿದಳು ಆಚೆಗವಳು
ಅದುವೇ ನನ್ನ ಸ್ಟಾಪಿನಲ್ಲಿ
ನಾ ಮುಂದು ಅವಳು ಹಿಂದು
ಹಿಂಬಾಲಿಸಲು
ಮಂಕಾಗಿ ನಿಂತೆ ಮರದ ನೆರಳಿನಲಿ
ಈಗ ನಾ ಅವಳ ಹಿಂದೆ
ಸಾಗುತಿಹುದು ದಾರಿ ನಮ್ಮಟ್ಟಿಯತ್ತ
ಒಂದೆಡೆ ದಿಗಿಲು ಮತ್ತೊಂದ್ದೆಡೆ ಹರುಷ
ಮನದಲಿ ಆಗುತಿರಲು
ತೆರೆದಳು ಗೇಟ್ಅ ನಮ್ಮಟ್ಟಿಯದ
ನಡೆದಳು ಅತ್ತಿ ಮೆಟ್ಟಿಲ ರಾಣಿಯಂತೆ
ನೋಡುತಲಿ ನಿಂತೆ ಅವಳ ನಡುವ
ಅಲ್ಲೇ ಗೇಟಿನಲಿ  ಅಲ್ಲೇ ಗೇಟಿನಲಿ
ನನ್ನ ಸನಿಹಕೆ ಬಂದಳವಳು
ನನ್ನವಳು ಅವಳು ನನ್ನವಳು .

ಒಳಬಂದು ಅಮ್ಮನ ಕೇಳುತಲಿ
ಅವಳು ಮನೆಯ ಮಾಲಿಕನ ಮಗಳು ಎನ್ನುತಲಿ
ಕುಣಿದಾಡಿದೆ ಮನೆಯ ಅಂಗಳದಲಿ
ನನ್ನವಳು ಅವಳು ನನ್ನವಳು ಎಂದು
ನನ್ನವಳು ಅವಳು ನನ್ನವಳು ಎಂದು .